Rocking star Yash encourages new comers in kannada film industry. Yash released the audio of Samyuktha 2 movie. Rocking Star Yash says, Rebel Star Ambareesh is his role model & Yash follows Ambareesh.
ರೆಬೆಲ್ ಸ್ಟಾರ್ ಹಾದಿಯಲ್ಲಿ ರಾಕಿಂಗ್ ಸ್ಟಾರ್ ಯಶ್.! ಚಿತ್ರರಂಗದ ಪ್ರತಿಯೊಬ್ಬರಿಗೂ ಒಬ್ಬ ರೋಲ್ ಮಾಡೆಲ್ ಅಂತ ಇದ್ದೇ ಇರ್ತಾರೆ. ಗಾಡ್ ಫಾದರ್ ಇಲ್ಲದೇ ಇದ್ರು ಕೂಡ ಇವರಂತೆ ಬೆಳೆಯಬೇಕು ಎಂಬ ಆಸೆಯಂತು ಪ್ರತಿಯೊಬ್ಬರಿಗೂ ಇದ್ದೇ ಇರುತ್ತೆ. ಅದೇ ರೀತಿ ಈಗ ರಾಕಿಂಗ್ ಸ್ಟಾರ್ ಯಶ್, ರೆಬೆಲ್ ಸ್ಟಾರ್ ಹಾದಿಯಲ್ಲಿ ಸಾಗೋದಕ್ಕೆ ಮುಂದಾಗಿದ್ದಾರೆ. ಅಂಬಿಯಂತೆ ಯಶ್ ಕೂಡ ಸಿನಿಮಾರಂಗದಲ್ಲಿ ಬೆಳೆಯಬೇಕು ಹಾಗೂ ಅವರಂತೆ ಜನರಲ್ಲಿ ಬೆರಿಯಬೇಕು ಎಂದು ನಿರ್ಧರಿಸಿದ್ದಾರಂತೆ. ಈ ಮಾತನ್ನ ಸ್ವತಃ ರಾಕಿಂಗ್ ಸ್ಟಾರ್ ಯಶ್ ಅವರೇ ಹೇಳಿಕೊಂಡಿದ್ದಾರೆ. ಹಾಗಿದ್ರೆ, ಯಶ್ ಈ ಮಾತನ್ನ ಹೇಳಿದ್ದೇಲ್ಲಿ? ಯಾವ ವಿಷಯಕ್ಕೆ ಹೇಳಿದರು. ಯಶ್ ಚಿತ್ರರಂಗಕ್ಕೆ ಈಗ ಬರುತ್ತಿರುವ ಹೊಸ ಕಲಾವಿದರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಹೊಸ ನಟರ ಸಿನಿಮಾಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅವರ ಸಿನಿಮಾಗಳ ಪ್ರಚಾರಕ್ಕೆ ಜೊತೆಯಾಗಿದ್ದಾರೆ.